167 ಕೋಟಿಗೆ ಮಾರಾಟವಾದ ರಾಜ ರವಿವರ್ಮಾ ಅವರ ಕಲಾಕೃತಿ

paintinga blog01

ಭಾರತೀಯ ಕಲಾ ಲೋಕದಲ್ಲಿ ಐತಿಹಾಸಿಕ ಕ್ಷಣ ನಿರ್ಮಾಣವಾಗಿದೆ. ಪ್ರಸಿದ್ಧ ಚಿತ್ರಕಾರ Raja Ravi Varma ಅವರ ಅಮೂಲ್ಯ ಕಲಾಕೃತಿ “Yashoda and Krishna” ಹರಾಜಿನಲ್ಲಿ ₹167.2 ಕೋಟಿಗೆ ಮಾರಾಟವಾಗಿ ಹೊಸ ದಾಖಲೆಯನ್ನು ನಿರ್ಮಿಸಿದೆ.

ಈ ಮಾರಾಟವು ಕೇವಲ ಒಂದು ದೊಡ್ಡ ಹಣದ ಅಂಕೆ ಅಲ್ಲ — ಇದು ಭಾರತೀಯ ಕಲೆಯ ಮೌಲ್ಯ, ಪರಂಪರೆ ಮತ್ತು ಭಾವನಾತ್ಮಕ ಶಕ್ತಿಗೆ ಜಗತ್ತು ನೀಡಿದ ಗೌರವವಾಗಿದೆ.

ಈ ಹರಾಜು ಮುಂಬೈನಲ್ಲಿ 01 ಏಪ್ರಿಲ್ 2026 ನಡೆದ Saffronart Spring Live Auctionನಲ್ಲಿ ಭಾರೀ ಪೈಪೋಟಿಯ ನಡುವೆ ನಡೆಯಿತು. ಆರಂಭದಲ್ಲಿ ಈ ಚಿತ್ರದ ಅಂದಾಜು ಬೆಲೆ ₹80 ಕೋಟಿಯಿಂದ ₹120 ಕೋಟಿ ನಡುವೆಯಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ನಡೆದ ಭಾರೀ bidding fight ಬೆಲೆಯನ್ನು ₹167.2 ಕೋಟಿವರೆಗೆ ಏರಿಸಿತು.

yashoda krishna by raja ravi varma rolled canvas reprint (unframed) etsy india

ಈ ಚಿತ್ರವನ್ನು ಖರೀದಿಸಿದವರು ಯಾರು?

ಈ ಅಮೂಲ್ಯ ಚಿತ್ರವನ್ನು ಖರೀದಿಸಿದವರು Cyrus S. Poonawalla, ಭಾರತದ ಖ್ಯಾತ ಉದ್ಯಮಿ ಮತ್ತು Serum Institute of India ಸಂಸ್ಥೆಯ ಸ್ಥಾಪಕರು.

img bl india serum 2 1 pk8sdtvd

COVID ಸಮಯದಲ್ಲಿ vaccine ಕ್ಷೇತ್ರದಲ್ಲಿ ವಿಶ್ವಕ್ಕೆ ದೊಡ್ಡ ಸೇವೆ ಮಾಡಿದ ವ್ಯಕ್ತಿಯಾಗಿ ಅವರ ಹೆಸರು ಜಗತ್ತಿಗೆ ಪರಿಚಿತವಾಗಿದ ಇದೀಗ ಅವರು ಭಾರತೀಯ ಕಲೆಯ ಮೇಲಿನ ತಮ್ಮ ಆಸಕ್ತಿಯನ್ನು ಈ ದಾಖಲೆಮಟ್ಟದ ಖರೀದಿಯಿಂದ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಹರಾಜಿನ ಪೈಪೋಟಿ

ಈ ಚಿತ್ರಕ್ಕಾಗಿ ನಡೆದ bidding fight ತುಂಬಾ intense ಆಗಿತ್ತು

ಬಹಳಷ್ಟು ದೊಡ್ಡ ಸಂಗ್ರಾಹಕರು ಮತ್ತು ಉದ್ಯಮಿಗಳು ಈ masterpiece ಅನ್ನು ಪಡೆಯಲು ಸ್ಪರ್ಧಿಸಿದರು. ಕೊನೆಯ ಕ್ಷಣಗಳಲ್ಲಿ bid ಒಂದರ ಹಿಂದೆ ಒಂದು ಏರಿದ ಕಾರಣ auction hallನಲ್ಲಿ ಭಾರೀ ಉತ್ಸಾಹದ ವಾತಾವರಣ ನಿರ್ಮಾಣವಾಯಿತು.

ಕೊನೆಗೆ Cyrus Poonawalla ಅವರು ಈ ಕಲಾಕೃತಿಯನ್ನು ಪಡೆದುಕೊಂಡರು.

ಈ ಬೆಲೆ ಹಿಂದಿನ M. F. Husain ಅವರ Gram Yatra ಚಿತ್ರದ ₹118 ಕೋಟಿಯ ದಾಖಲೆಯನ್ನು ಕೂಡ ಮೀರಿಸಿದೆ.

ಈ ಖರೀದಿಯ ನಂತರ ಅವರು ಹೇಳಿದ ಮಾತು ತುಂಬಾ ಗಮನಾರ್ಹವಾಗಿದೆ:

“ಈ ರಾಷ್ಟ್ರೀಯ ಖಜಾನೆಯನ್ನು ಜನರು ಕಾಲಕಾಲಕ್ಕೆ ನೋಡುವ ಅವಕಾಶ ಇರಬೇಕು.”

ಈ ಹೇಳಿಕೆ ಅವರ ಕಲೆಯ ಮೇಲಿನ ಗೌರವವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಅಂದರೆ, ಈ ಚಿತ್ರವನ್ನು ಕೇವಲ ಖಾಸಗಿ ಸಂಗ್ರಹದಲ್ಲಿ ಇಟ್ಟುಕೊಳ್ಳದೇ, ಸಾರ್ವಜನಿಕ ವೀಕ್ಷಣೆಗೆ ಕೂಡ ಅವಕಾಶ ಕೊಡಬೇಕು ಎಂಬ ಅವರ ಉದ್ದೇಶ ಇದೆ.

ಇದು ಕಲಾ ಪ್ರಿಯರಿಗೆ ತುಂಬಾ ಸಂತೋಷದ ವಿಷಯ

“Yashoda and Krishna” ಚಿತ್ರದಲ್ಲಿ ತಾಯಿ ಮಮತೆ ಮತ್ತು ದೈವಿಕ ಪ್ರೀತಿಯ ಅದ್ಭುತ ಅಭಿವ್ಯಕ್ತಿ ಕಾಣಿಸುತ್ತದೆ.

ಬಾಲ ಕೃಷ್ಣನೊಂದಿಗೆ ಯಶೋದೆಯ ಆತ್ಮೀಯ ಕ್ಷಣವನ್ನು ರಾಜ ರವಿ ವರ್ಮಾ ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ.

ಇದೇ ಕಾರಣಕ್ಕೆ ಈ ಚಿತ್ರವು ಕೇವಲ ಒಂದು painting ಅಲ್ಲ — ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ.

ಈ painting ಅನ್ನು ರಾಜ ರವಿ ವರ್ಮಾ ತಮ್ಮ ಕಲಾ ಜೀವನದ ಉನ್ನತ ಹಂತದಲ್ಲಿ, ಸುಮಾರು 1890ರ ಅವಧಿಯಲ್ಲಿ oil on canvas ಶೈಲಿಯಲ್ಲಿ ರಚಿಸಿದ್ದರು.

4 ravi varma self portrait

ರಾಜ ರವಿ ವರ್ಮಾ ಭಾರತೀಯ ಕಲಾ ಇತಿಹಾಸದ ಅತ್ಯಂತ ಮಹಾನ್ ಚಿತ್ರಕಾರರಲ್ಲಿ ಒಬ್ಬರು.
ಅವರನ್ನು ಸಾಮಾನ್ಯವಾಗಿ “ಭಾರತೀಯ ಆಧುನಿಕ ಕಲೆಯ ಪಿತಾಮಹ” ಎಂದು ಕರೆಯಲಾಗುತ್ತದೆ
ಅವರು 1848 ಏಪ್ರಿಲ್ 29ರಂದು ಇಂದಿನ Kilimanoor ನಲ್ಲಿ ಜನಿಸಿದರು. ಅವರು ರಾಜಕುಟುಂಬದ ಹಿನ್ನೆಲೆಯವರಾಗಿದ್ದು, ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ಚಿಕ್ಕವಯಸ್ಸಿನಲ್ಲಿ ಮನೆಯ ಗೋಡೆಗಳ ಮೇಲೆ ಚಾಕ್ ಮತ್ತು ಕರಿಯಿಂದ ಚಿತ್ರ ಬಿಡಿಸುವುದರ ಮೂಲಕ ಅವರ ಕಲಾ ಪ್ರಯಾಣ ಆರಂಭವಾಯಿತು.

ಅವರು ಭಾರತೀಯ ಪೌರಾಣಿಕ ಕಥೆಗಳು ಮತ್ತು ಪಾತ್ರಗಳನ್ನು ಯೂರೋಪಿಯನ್ realism ಶೈಲಿಯಲ್ಲಿ ಚಿತ್ರಿಸುವ ಮೂಲಕ ಹೊಸ ಕಲಾ ಭಾಷೆಯನ್ನು ನಿರ್ಮಿಸಿದರು.

ಇಂದು ದೇವರುಗಳ traditional ಚಿತ್ರಣಗಳಲ್ಲಿ ಕಾಣುವ ಅನೇಕ ರೂಪಗಳಿಗೆ ಅವರ ಕಲೆಯ ಪ್ರಭಾವ ಅಪಾರವಾಗಿದೆ.

Categories:

Leave a Reply

Your email address will not be published. Required fields are marked *

Related Posts :-